ಪ್ರೀತಿಯ ತಂದೆಯೇ, ನಿಮ್ಮ ಸೇವಕ ಪೂಜ್ಯ ರೇಮಂಡ್‌ರವರನ್ನು ನಿಷ್ಟ್ಠಾವಂತ ಯಾಜಕರನ್ನಾಗಿಯೂ ಹಾಗೂ ಬೆಥನಿಯ ಕಿರುಪುಷ್ಪ ಧಾರ್ಮಿಕ ಭಗಿನಿಯರ ಸಭೆಯ ಸಂಸ್ಥಾಪಕರನ್ನಾಗಿ ಆರಿಸಿದಕ್ಕಾಗಿಯೂ ನಿಮಗೆ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಪರಮ ಪ್ರಸಾದದ ಬಗ್ಗೆ ಅವರಿಗಿದ್ದ ಅನನ್ಯ ಭಕ್ತಿ, ತಾಯಿ ಧರ್ಮಸಭೆಯ ಮೇಲಿನ ಪ್ರೀತಿ, ಶುಭ ಸಂದೇಶವನ್ನು ಸಾರುವಲ್ಲಿ ಅವರಿಗಿದ್ದ ಆದಮ್ಯ ಉತ್ಸಾಹ ಹಾಗೂ ಬಡವರಿಗೆ ಅವರು ತೋರಿದ ದಯೆಯ ಹೃದಯಕ್ಕಾಗಿ ಅವರಿಗೆ ಧಾರಾಳವಾದ ಫಲವನ್ನು ಅನುಗ್ರಹಿಸಿದ್ದೀರಿ. ಅವರಂತೆಯೇ ನಾವು ಕೂಡ ನಮ್ಮ ತಾಯಿ ಮರಿಯಮ್ಮನವರಲ್ಲಿ ವಿಶ್ವಾಸ, ಭಕ್ತಿ, ಪ್ರೀತಿಯಿಂದ ಒಂದಾಗಿ, ಶುಭ ಸಂದೇಶದ ದೂತರಾಗುವಂತಹ ವರವನ್ನು ಕರುಣಿಸಿರಿ.

ಪ್ರೀತಿಯ ತಂದೆಯೇ ನಿಮ್ಮ ಸೇವಕರಾದ ಪೂಜ್ಯ ರೇಮಂಡ್‌ರವರ ಮಧ್ಯಸ್ಥಿಕೆಯಿಂದ ನಮ್ಮ ಈ ಕೋರಿಕೆಯನ್ನು ಈಡೇರಿಸಬೇಕೆಂದು ದೈನ್ಯದಿಂದ ಮೊರೆಯಿಡುತ್ತೇವೆ. (ನಿಮ್ಮ ಬೇಡಿಕೆಯನ್ನು ಇಲ್ಲಿ ನಿವೇದಿಸಿರಿ)

ಓ ದೇವರೇ, ನಿಮ್ಮ ಸೇವಕ ಪೂಜ್ಯ ರೇಮಂಡ್‌ರವರಿಗೆ ಸಂತರ ಗೌರವವನ್ನು ಅತೀ ಶೀಘ್ರದಲ್ಲಿ ದಯಪಾಲಿಸಿ, ಈ ಮೂಲಕ ನಿಮ್ಮ ಮಹಿಮೆಯನ್ನು ಹಾಗೂ ಶುಭ ಸಂದೇಶದ ಭಕ್ತಿಯನ್ನು ಎಲ್ಲೆಡೆ ಬೆಳಗುವಂತಹ ಅನುಗ್ರಹವನ್ನು ದಯಪಾಲಿಸಿರೆಂದು ವಿಶ್ವಾಸದಿಂದ ಪ್ರಾರ್ಥಿಸುತ್ತೇವೆ.

ಪಿತನಿಗೂ ಸುತನಿಗೂ... (1 ಬಾರಿ)

Home | News | Sitemap | Contact

Copyright © 2024 rfcmascarenhas.org

All rights reserved. Powered by eCreators